2026-27ನೇ ವರ್ಷದ ವಸತಿ ಕಾಲೇಜುಗಳ ಪ್ರಥಮ ಪಿಯುಸಿಗೆ ಆನ್ಲೈನ್ ಅರ್ಜಿ ಆಹ್ವಾನ

2026-27ನೇ ವರ್ಷದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಉನ್ನತೀಕರಿಸಲಾಗಿರುವ ವಸತಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿ.ಯು.ಸಿ. ದಾಖಲಾಗಿಗಾಗಿ ಅಭ್ಯರ್ಥಿಗಳಿಂದ Online ಮೂಲಕ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು :

  • ಆನ್ಲೈನ್‌ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 23/04/2026
  • ಆನ್ಲೈನ್‌ ಅರ್ಜಿ ಸಲ್ಲಿಸಲು ಕಡೆ ದಿನಾಂಕ : 29/04/2026
  • ಆನ್ಲೈನ್‌ನಿಂದ ಬಂದ ಅರ್ಜಿಗಳ ಪರಿಶೀಲನಾ ದಿನಾಂಕ : 30/04/2026
  • ಮೊದಲನೆ ಹಂತದ ಆಯ್ಕೆ ಪಟ್ಟಿ ಪ್ರಕಟಣ ದಿನಾಂಕ : 04/05/2026
  • ಮೊದಲನೆ ಹಂತದ ಆಯ್ಕೆಪಟ್ಟಿಯ ವಿದ್ಯಾರ್ಥಿಗಳ ಪ್ರವೇಶ ದಿನಾಂಕ : 08/05/2026
  • ಎರಡನೇ ಹಂತದ ಖಾಲಿ ಸ್ಥಾನಗಳ ಪಟ್ಟಿ ಪ್ರಕಟಣ ದಿನಾಂಕ : 12/05/2026
  • ಎರಡನೇ ಹಂತದ ಆಯ್ಕೆಪಟ್ಟಿಯ ವಿದ್ಯಾರ್ಥಿಗಳ ಪ್ರವೇಶ ದಿನಾಂಕ : 19/05/2026
  • ಮೂರನೇ ಹಂತದ ಆಯ್ಕೆ ಪಟ್ಟಿ ಪ್ರಕಟಣ ದಿನಾಂಕ                         : 22/05/2026
  • ಮೂರಲನೇ ಹಂತದ ಆಯ್ಕೆಪಟ್ಟಿಯ ವಿದ್ಯಾರ್ಥಿಗಳ ಪ್ರವೇಶ ದಿನಾಂಕ : 27/05/2026
  • ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ತರಗತಿ ಆರಂಭ ದಿನಾಂಕ : 29/05/2026

 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು :

  • SATS ಸಂಖ್ಯೆ
  • ಎಸ್.ಎಸ್‌.ಎಲ್.‌ಸಿ. ಅಂಕಪಟ್ಟಿ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ವಿಷೇಶ ವರ್ಗದ ಪ್ರಮಾಣ ಪತ್ರ (ಅನ್ವಯಿಸಿದಲ್ಲಿ)
  • ಇತರೆ ದಾಖಲಾತಿ

 

ಸರ್ಕಾರದ ಆದೇಶಗಳನ್ವಯ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮದನ್ವಯ ಸೀಟುಗಳನ್ನು ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ.

  • ವಸತಿ ಶಾಲೆ / ಕಾಲೇಜುಗಳಲ್ಲಿ ಲಭ್ಯವಿರುವ ಶೇ.100ರಷ್ಟು ಸ್ಥಾನಗಳಲ್ಲಿ ಆಯಾ ಜಿಲ್ಲೆ ಸ್ಥಳೀಯ (Local) ಅಭ್ಯರ್ಥಿಗಳಿಗೆ ವರ್ಗವಾರು ಶೇ.75ರಷ್ಟು ಹಾಗೂ ಇತರೆ ಜಿಲ್ಲೆಗಳ (Non Local) ಅಭ್ಯರ್ಥಿಗಳಿಗೆ ಶೇ.25ರಷ್ಟು ಸ್ಥಾನಗಳನ್ನು ವರ್ಗಾವಾರು ಮೀಸಲಿಟ್ಟು ಸೀಟುಗಳ ಹಂಚಿಕೆ.
  • 2026-27ನೇ ಸಾಲಿನ ಶೇ.50ರಷ್ಟು ಸ್ಥಾನಗಳನ್ನು KREIS ವಿದ್ಯಾರ್ಥಿಗಳಿಗೆ ಮೀಸಲಿರಿಸಲು ಹಾಗೂ ಉಳಿದ ಶೇ.50ರಷ್ಟು ಸ್ಥಾನಗಳನ್ನು KREIS ವಸತಿ ಶಾಲೆಗಳು, ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳನ್ನು ಒಟ್ಟಾರೆಯಾಗಿ ಪರಿಗಣಿಸಿ, ಪ್ರವೇಶಾವಕಾಶವನ್ನು ಮೆರಿಟ್‌ ಕಮ್‌ ಮೀಸಲಾತಿ ಮತ್ತು ವಿದ್ಯಾರ್ಥಿಗಳ ಆದ್ಯತೆ ಆಧಾರದ ಮೇಲೆ ದಾಖಲಾತಿ ನೀಡುವುದು.
  • KREIS ಅಧೀನದಲ್ಲಿರುವ ವಸತಿ ಕಾಲೇಜುಗಳ ಪ್ರಥಮ ಪಿಯುಸಿ ದಾಖಲಾತಿಗೆ ಸಂಬಂಧಿಸಿದಂತೆ, ಅರ್ಹ ಅಭ್ಯರ್ಥಿಗಳು / ಪೋಷಕರು ಅರ್ಜಿಯನ್ನು https://kreis.karnataka.gov.in ವೆಬ್‌ಸೈಟ್‌ ಮೂಲಕ ಸಲ್ಲಿಸಲು ಪತ್ರಕಾ ಪ್ರಕಟಣೆ ಹೊರಡಿಸುವುದು.
  • ಅಭ್ಯರ್ಥಿಗಳು / ಪೋಷಕರು ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಿರುವುದನ್ನು ಮಾತ್ರ ಪರಿಗಣಿಸಿವುದು ಹಾಗೂ ಪೋಷಕರಿಂದ / ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿರುವ ಬಗ್ಗೆ ಆನ್ಲೈನ್‌ ಅರ್ಜಿ ಸಲ್ಲಿಸಿರುವುದನ್ನು ಡೌನ್‌ಲೋಡ್‌ ಮಾಡಿ ತಮ್ಮ ಬಳಿ ಇರಿಸಿಕೊಳ್ಳುವುದು ಕಡ್ಡಾಯ.
  • ಸೀಟು ಹಂಚಿಕೆಯ ದಾಖಲಾತಿ ಸಮಯದಲ್ಲಿ ಈ ಕೆಳಕಂಡ ಮೂಲ ದಾಖಲಾತಿಗಳನ್ನು ಪಡೆದು ಕಡತ ನಿರ್ವಹಣೆ ಮಾಡುವುದು.
  • ಮೀಸಲಾತಿಗೆ ಸಂಬಂಧಿಸಿದಂತೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಮೂಲ ಪತ್ರ
  • ಆಧಾರ ಪ್ರತಿ
  • ಗ್ರಾಮೀಣ / ನಗರ ಪ್ರದೇಶದ ಶಾಲೆಯಿಂದ ಪಡೆಯಲಾದ ವ್ಯಾಸಂಗ ಪ್ರಮಾಣ ಪತ್ರ ದೃಢೀಕೃತ ಪ್ರತಿ
  • ಎಸ್.ಎಸ್.ಎಲ್‌.ಸಿ. ಅಂಕಪಟ್ಟಿಯ ಮೂಲ ಪ್ರತಿ
  • ವಿಶೇಷ ವರ್ಗದ ದೃಢೀಕೃತ ಪ್ರಮಾಣ ಪತ್ರ
  • ಇತರೆ ದಾಖಲಾತಿಗಳು
  • 2026-27ನೇ ಸಾಲಿನ ಅಯವ್ಯಯ ಘೋಷಣೆ ಕಂಡಿಕೆ (184)ರಲ್ಲಿ ಪರಿಶಿಷ್ಟ ಜಾತಿ, ಪರಿಶೀಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣಕ್ಕೆ ಅನುವು ಮಾಡಿಕೊಡಲು ಒಟ್ಟು 31 ವಸತಿ ಶಾಲೆಗಳನ್ನು ಉನ್ನತೀಕರಿಸಲಾಗುವುದು ಎಂದು ಘೋಷಿಸಲಾಗಿದೆ.
  • ಅಯವ್ಯಯ ಘೋಷಣೆಯನ್ವಯ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಹಂತದಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಅಗತ್ಯ ಮೂಲಭೂತ ಸೌಕರ್ಯಗಳನ್ನು ಹೊಂದಿರುವಂತಹ 31 ವಸತಿ ಶಾಲೆಗಳನ್ನು ಆಯ್ಕೆ ಮಾಡಿ, ಪದವಿ ಪೂರ್ವ ಕಾಲೇಜನ್ನಾಗಿ ಉನ್ನತೀಕರಿಸಲು ಸರ್ಕಾರದಿಂದ ಅನುಮೋದನೆ ಪಡೆಯಲು ಕ್ರಮವಹಿಸಲಾಗುತ್ತಿರುವ ಹಿನ್ನಲೆಯಲ್ಲಿ ಉನ್ನತೀಕರಿಸಲಾಗುತ್ತಿರುವ 31 ವಸತಿ ಶಾಲೆಗಳಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ ಪ್ರಥಮ ಪಿಯುಸಿ ದಾಖಲಾತಿಗೆ ಪ್ರಕ್ರಿಯೆಗೆ ಕ್ರಮವಹಿಸಿ ವಿಜ್ಞಾನ ವಿಷಯಗಳಲ್ಲಿ ನಿಯಮಾನುಸಾರ ದಾಖಲಾತಿಗೆ ಅಗತ್ಯ ಕ್ರಮವಹಿಸುವುದು.
  • 2026-27ನೇ ಆಯವ್ಯಯ ಘೋಷಣೆಯನ್ನು “ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿಯ ಎರಡು, ಪರಿಶಿಷ್ಟ ಪಂಗಡದ ಒಂದು ಮತ್ತು ಹಿಂದುಳಿದ ವರ್ಗಗಳ ಒಂದು ಸೇರಿದಂತೆ ಒಟ್ಟು ನಾಲ್ಕು ಕೈಸ್‌ ವಸತಿ ಶಾಲೆಗಳನ್ನು K-CET/JEE/NEET ಪರೀಕ್ಷೆಗೆ ಗುಣಮಟ್ಟದ ತರಬೇತಿ ನೀಡಲು Center of Excellence ಗಳನ್ನಾಗಿ ಉನ್ನತೀಕರಿಸಲಾಗುವುದು. ಈ ವಸತಿ ಶಾಲೆಗಳಿಗೆ ಪ್ರತ್ಯೇಕವಾದ ಪ್ರವೇಶ ಪರೀಕ್ಷೆಯ ಮೂಲಕ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು.
  • ಆಯವ್ಯಯ ಘೋಷಣೆಯನ್ವಯ ನಾಲ್ಕು KREIS ವಸತಿ ಶಾಲೆಗಳನ್ನು K-CET/JEE/NEET ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡುವ ಉದ್ದೇಶದಿಂದ Center of Excellence ಗಳ ಆಯ್ಕೆ ಮತ್ತು ಪ್ರಾರಂಭದ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.

(ಹೆಚ್ಚಿನ ಮಾಹಿತಿಗಾಗಿ ಸುತ್ತೋಲೆಯನ್ನು ಓದಿಕೊಳ್ಳಿ.)

KREIS ವಸತಿ ಕಾಲೇಜುಗಳ ಪ್ರಥಮ ಪಿಯುಸಿ ದಾಖಲಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು https://kreis.karnataka.gov.in ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸುವುದು.